೧೯೦೪-೬೬. ಇಂಗ್ಲಿಷ್ ಕಾದಂಬರಿಕಾರ್ತಿ. ಜನನ ಲಂಡನ್ನಿನಲ್ಲಿ. ತಂದೆಯೂ ಬರೆಹಗಾರ. ಅನೇಕ ಪತ್ತೆದಾರಿ ಕಾದಂಬರಿಗಳನ್ನು ಬರೆದಳು. ೧೯೨೭ರಲ್ಲಿ ಕಲಾವಿದ ಯಂಗ್ ಮನ್ ಕಾರ್ಟರ್ ನನ್ನ ಮದುವೆಯಾದಳು. ಆಕೆ ಚಿತ್ರಿಸಿದ ಪತ್ತೆದಾರ ಆಲ್ಬರ್ಟ್ ಕ್ಯಾಂಪಿಯನ್ ಬಹಳ ಜನಪ್ರಿಯನಾದ. == ಕೃತಿಗಳು == ದಿ ಕ್ರೈಮ್ ಅಟ್ ಬ್ಲಾಕ್ ಡಡ್ಲಿ (೧೯೨೯), ಫ್ಲವರ್ ಫಾರ್ ದಿ ಜಜ್ (೧೯೩೬), ಮೋರ್ ವರ್ಕ್ ಫಾರ್ ದಿ ಅಂಡರ್ಟೇಕರ್ (೧೯೪೯), ದಿ ಟೈಗರ್ ಇನ್ ದಿ ಸ್ಮೋಕ್ (೧೯೫೨), ನೋ ಲವ್ ಲಾಸ್ಟ್ (೧೯೫೪)- ಇವು ಈಕೆಯ ಪ್ರಮುಖ ಕಾದಂಬರಿಗಳು. ಮಿಸ್ಟರ್ ಕ್ಯಾಂಪಿಯನ್ ಅಂಡ್ ಅದರ್ಸ್ (೧೯೩೯) ಈಕೆಯ ಕಥಾ ಸಂಕಲನ.